ಕೊಲ್ಹಾರ : ಕನ್ನಡ ನಾಡು ನುಡಿ ಶ್ರೀಮಂತಗೊಳಿಸಿದ ಕವಿ, ಮಾತೃಭಾಷಾ ಮಾಧ್ಯಮ, ಗೋಕಾಕ್ ಚಳುವಳಿ ಸೇರಿದಂತೆ ಹಲವಾರು ಚಳುವಳಿಗೆ ಮುಂಚೂಣಿವಹಿಸಿದ್ದ ಚಂಪಾ ಕನ್ನಡ ಸಾಂಸ್ಕ್ರತಿಕ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು. ಅಧ್ಯಕ್ಷ ಜಗದೀಶ ಸಾಲಳ್ಳಿ ಹೇಳಿದರು.
ಪಟ್ಟಣದ ಭುವನೇಶ್ವರಿ ವೃತ್ತದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಾಹಿತಿ ಚಂದ್ರಶೇಖರ ಪಾಟೀಲ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ನಿಮ್ಮ ಕರೆ ಜನಪ್ರಿಮವಾಗಿರುವುದು ಕನ್ನಡ ಜಗತ್ತು ಎಂದೂ ಮರೆಯದು, ಕನ್ನಡ ಭಾಷಾ ಮಾಧ್ಯಮ ಕಲಿಕೆ, ಕರ್ನಾಟಕದಲ್ಲಿ ಕೇಂದ್ರ ಮಾಧ್ಯಮ ಶಾಲೆಗಳು ಕನ್ನಡ ಕಲಿಸಬೇಕು, ಶನಿವಾರದ ರಿಯಾಯತಿ ದರದಲ್ಲಿ ಪುಸ್ತಕ ಸಂತೆ, ಯುವ ಬರಹಗಾರರಿಗೆ ವೇದಿಕೆ ಒದಗಿಸಿರುವುದು ಎಂದೂ ಮರೆಯಲಾಗದು ಚಂಪಾ ಕನ್ನಡದ ಶ್ರೇಷ್ಠ ಬಂಡಾಯ ಸಾಹಿತಿ, ನಾಟಕಕಾರರು, ಪತ್ರಕರ್ತರಾಗಿ ಸಲ್ಲಿಸಿದ ಸೇವೆ ಗಣನೀಯವಾದದ್ದು ಎಂದರು.
ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ ನಿಗಡಿ ಮಾತನಾಡಿ ಸಂಕ್ರಮಣ ಮುನ್ನಾ ದಿನಗಳಂದು ಸಂಕ್ರಮಣ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಸಮಾಜದ ಓರೆಕೋರೆ ತಿದ್ದಿದ ಸಾಹಿತಿ ಚಂಪಾ, ಅವರ ಕಥೆ, ಕಾದಂಬರಿ, ಸಾಹಿತ್ಯಗಳನ್ನು ಜನರಿಗೆ ತಿಳಿಸುವ ಕಾರ್ಯ ನಮ್ಮ ಪರಿಷತ್ತು ಮಾಡಲಿದೆ ಎಂದರು.
ಕೊಲ್ಹಾರ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಲ್ಲಿಕಾರ್ಜುನ ಕುಬಕಡ್ಡಿ ಮಾತನಾಡಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕನ್ನಡದ ಭಾಷೆ ಬೆಳವಣಿಗೆಗೆ ಶ್ರಮಿಸಿದ ಶ್ರೇಷ್ಠ ನಾಟಕಕಾರ, ಬಂಡಾಯ ಸಾಹಿತಿಗಳು ಎಂದರು
ಶಿಕ್ಷಕರ ಸಂಘದ ನಿರ್ದೇಶಕ ಟಿ ಪಿ ದಳವಾಯಿ, ಶಿಕ್ಷಕರಾದ ಸಿದ್ದು ಕೋಟ್ಯಾಳ, ವಾಯ್.ಜಿ.ಶಿರೋಳ.ಬಿ, ಟಿ, ಹಿಕ್ಕನಗುತ್ತಿ, ಜಿ, ಪಿ, ಕುಲಕುರ್ಣಿ.ಈರಣ್ಣ ಗಡ್ಡಿ, ಈರಣ್ಣ ಕುಂಬಾರ, ಪುಂಡಲಿಕ ದಳವಾಯಿ, ನಾಗು ವಡ್ಡರ, ರಾಚು ಆಲಗುಂಡ, ರುದ್ರೇಶ ಗಣಿ, ಖಾಜಿ ಬಂದೇನವಾಜ.ಬಸವರಾಜ ಗಡ್ಡಿ, ರಾಘವೇಂದ್ರ ಢಳವೆ, ಇದ್ದರು